ಶಾಂತಾದೇವಿ ಮಾಳವಾಡ ಇವರು ೧೯೨೨ ಡಿಸೆಂಬರ್ ೧೦ ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. == ವಿವಾಹ == ೧೯೩೭ನೆಯ ಇಸವಿಯಲ್ಲಿ ಇವರ ಮದುವೆ ಪ್ರೊ. ಸ.ಸ. ಮಾಳವಾಡರ ಜೊತೆ ಆಯಿತು. ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. ೧೯೪೦ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ ೧೯೩೮ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಿದರು. == ಸಾಮಾಜಿಕ == ಅಕ್ಕನ ಬಳಗ ಸ್ಥಾಪನೆ (೦೦೦೧ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (೧೯೬೫) ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (೧೯೭೩-೧೯೭೮) ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (೧೯೭೯) ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(೧೯೬೧-೧೯೬೨) ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(೧೯೬೭-೧೯೭೦) ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (೧೯೭೪-೧೯೭೮) ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು == ಕಥಾಸಂಕಲನ == ಮೊಗ್ಗೆಯ ಮಾಲೆ ಕುಂಕುಮ ಬಲ == ಗದ್ಯ ಸಾಹಿತ್ಯ == ಹಚ್ಚೇವು ಕನ್ನಡದ ದೀಪ. ಕನ್ನಡದ ತಾಯಿ. ಮಹಿಳೆಯರ ಅಲಂಕಾರ ಸೊಬಗಿನ ಮನೆ ಮಹಿಳೆಯರ ಆತ್ಮಶ್ರೀ. ರಸಾಪಾಕ ಸಾರ್ವಜನಿಕ ರಂಗದಲ್ಲಿ ಮಹಿಳೆ. ದಾಂಪತ್ಯಯೋಗ ವಧುವಿಗೆ ಉಡುಗೊರೆ. ಜನನೀ ಜನ್ಮ ಭೂಮಿಶ್ಚ. ಮಹಿಳಾ ಚೇತನ. ಸಮುಚ್ಚಯ. == ಕಾದಂಬರಿ == ಬಸವ ಪ್ರಕಾಶ. == ಮಕ್ಕಳ ಸಾಹಿತ್ಯ == ಬೆಳವಡಿ ಮಲ್ಲಮ್ಮ. ಕೆಳದಿ ಚೆನ್ನಮ್ಮ. ನಾಗಲಾಂಬಿಕೆ. ನೀಲಾಂಬಿಕೆ ಕುಟುಂಬ. ಬಸವಯುಗದ ಶಿವಶರಣೆಯರು ಭಾರತದ ಮಾನಸಪುತ್ರಿಯರು ಗಂಗಾಂಬಿಕೆ ಶಿವಯೋಗಿಣಿ ಎಣ್ಣೆ ಹೊಳೆಯ ನಂದಾದೀಪ ಪುರಾತನ ಶರಣರು ದಾನದಾಸೋಹಿ ದಾನಮ್ಮ. == ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ' ಸಾಹಿತ್ಯಸುಮ ' ಬಂಗಾರದ ಪದಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೬) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೨) ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (೧೯೯೧) ಷಷ್ಟ್ಯಬ್ದಿ ಸಮಾರಂಭ (' ಪ್ರಶಾಂತ' ಆಭಿನಂದನ ಗ್ರಂಥ ಸಮರ್ಪಣೆ:೧೯೮೨)